ಬೆಂಗಳೂರು : ಕೆ.ಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಯುವಕನನ್ನ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ ಆರೋಪದಡಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳ ಬಂಧನ ಪ್ರಕರಣಕ್ಕೆ ಸಂಬಂಧ ಸ್ಫೋಟಕ ತಿರುವು ಸಿಕ್ಕಿದೆ.


COMMERCIAL BREAK
SCROLL TO CONTINUE READING

ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮಹಿಳೆಯೊಂದಿಗೆ ಬೆಳೆಸಿಕೊಂಡಿದ್ದ ಸಂಬಂಧ ಹಾಗೂ ಹಣಕಾಸಿನ ವ್ಯವಹಾರವೇ ಮಂಜುನಾಥ್ ಕೊಲೆಗೆ ಕಾರಣವಾಗಿದೆ. ಮೃತ ಮಂಜುನಾಥ್ ತನ್ನ ಊರಿನಲ್ಲಿ ಖಾನಾವಳಿ ನಡೆಸುತ್ತಿದ್ದ. ಇತ್ತ ಸರೋಜಾ ಸಹ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದಳು. ಈಕೆಗೆ ಮೂವರು ಮಕ್ಕಳಿದ್ದು, ಗಂಡ ದೂರವಾಗಿ ದುಬೈಗೆ ತೆರಳಿದ್ದ. ಹೀಗಾಗಿ ಒಂದೇ ಊರಿನವರಾಗಿದ್ದ ಇಬ್ಬರ ನಡುವೆ ಆತ್ಮೀಯತೆ ಬೆಳೆದು ದೈಹಿಕ ಸಂಪರ್ಕ ಸಹ ಇತ್ತು. ಸುಮಾರು 2 ವರ್ಷಗಳ ಕಾಲ ಚೆನ್ನಾಗಿಯೇ ಇದ್ದ ಸಂಬಂಧ ಬರುಬರುತ್ತ ಹಳಸಿ ಹೋಗಿತ್ತು. ಇದಕ್ಕೆ ಪ್ರಮುಖ ಕಾರಣ ಹಣದ ವ್ಯವಹಾರ... ಸರೋಜಾ ಮಂಜುನಾಥನ ಬಳಿ ತನಗಿರುವ ಹಣದ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಳು. 


ಇದನ್ನೂ ಓದಿ : Kannada flag burnt Case: ಪೊಲೀಸರ ಮೇಲಿನ ಸೇಡು-ಮಿಡೀಯಾ ಕವರೇಜ್ ಗಾಗಿ ಕನ್ನಡ ಬಾವುಟ ಸುಟ್ಟಿದ್ದ ಟೆಕ್ಕಿ..!


ಹೀಗಾಗಿ ಮಂಜುನಾಥ ತಾನು ನಡೆಸುತ್ತಿದ್ದ ಖಾನಾವಳಿ ಮಾರಿ ಸರೋಜಾಗೆ ಹಣದ ಸಹಾಯ ಮಾಡಿದ್ದ. ಸಂಬಂಧ ಕೆಟ್ಟ ಮೇಲೆ ಸರೋಜಾ ಸಹ ಮಂಜುನಾಥನಿಂದ ದೂರವಾಗಲು ಶುರುಮಾಡಿದ್ದಳು. ಹೀಗಾಗಿ ನನ್ನ ಹಣ ಹಿಂದಿರೂಗಿಸು, ಇಲ್ಲವೇ ನನ್ನ ಜೊತೆ ಮೊದಲಿನಂತೆ ಸಂಬಂಧದಲ್ಲಿರು ಎಂದು ಮಂಜುನಾಥ ಪೀಡಿಸಲು ಶುರು ಮಾಡಿದ್ದ. ಇವರಿಬ್ಬರ ಸಂಬಂಧದ ಬಗ್ಗೆ ಸರೋಜಾ ಕುಟುಂಬ ಹಾಗೂ ಮಂಜುನಾಥನ ಕುಟುಂಬಕ್ಕೂ ಗೊತ್ತಿತ್ತು. ಮಂಜುನಾಥ ಕೊಟ್ಟ ಹಣದಲ್ಲಿ ಸರೋಜಾ ತನ್ನಿಬ್ಬರು ತಂಗಿಯರಿಗೆ ಮದುವೆ ಸಹ ಮಾಡಿದ್ದಳಂತೆ. 


ದಿನೇ ದಿನೇ ಮಂಜುನಾಥನ ಕಾಟ ಜಾಸ್ತಿಯಾದ ಕಾರಣ ನವನಗರ ಪೊಲೀಸ್ ಠಾಣೆಯಲ್ಲಿ ಸರೋಜಾ  ದೂರು ದಾಖಲಿಸಿ ಅಲ್ಲಿಂದ ಬಟ್ಟೆ ವ್ಯಾಪಾರ ಮಾಡಲು ದಾವಣಗೆರೆಗೆ ಬಂದಿದ್ದಳು.‌ ಆದರೆ ದಾವಣಗೆರೆಗೂ ತೆರಳಿದ್ದ ಮಂಜುನಾಥ ನನಗೆ ನೀನು ಬೇಕು ಇಲ್ಲವೇ ಹಣ ವಾಪಸ್ ಮಾಡು ಎಂದು ಪೀಡಿಸಿದ್ದಾನೆ. ಈ ಹಿನ್ನೆಲೆ ದಾವಣಗೆರೆಯ ಗಾಂಧಿನಗರದಲ್ಲಿ ಮಂಜುನಾಥನ ವಿರುದ್ಧ ಮತ್ತೊಂದು ದೂರು ದಾಖಲಾಗಿತ್ತು. ಇನ್ನೂ  ಸರೋಜಾ ತಾಯಿ, ಆಕೆಯ ತಂಗಿ ಕುಟುಂಬ 6 ತಿಂಗಳ ಹಿಂದೆ  ಬೆಂಗಳೂರಿಗೆ ಬಂದು ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ರು. ಹೀಗಾಗಿ ಸರೋಜಾ ಮಂಜುನಾಥನ ಉಪಟಳ ತಾಳಲಾರದೇ ಬೆಂಗಳೂರಿಗೆ ಬಂದು ಇಲ್ಲೆ ನೆಲೆಸಿದ್ದಳು. 


ಆದರೆ ಇಲ್ಲಿಗೂ ಬಂದರು ಮಂಜುನಾಥ ಮಾತ್ರ ಸರೋಜಾ ಬೆನ್ನು ಬಿಡದೇ ಬೆಂಗಳೂರಿಗೂ ಬಂದು 2 ದಿನ ಕೆಪಿ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಮನೆ ಮಾಡಿದ್ದ ಸರೋಜಾ ಹಾಗೂ ಕುಟುಂಬಸ್ಥರನ್ನು ಕಾಡಿ ತನ್ನೂರು ಬಾದಾಮಿ ತಾಲೂಕಿನ ಗುಳೇದಗುಡ್ಡ ಗ್ರಾಮಕ್ಕೆ ತೆರಳಿದ್ದ.  ಮಂಜುನಾಥನ ಕಾಟ ಹೆಚ್ಚಾದ ಕಾರಣ ಅವನಿಗೆ ಒಂದು ಗತಿ ಕಾಣಿಸಬೇಕು ಅಂತಾ ನಿರ್ಧಾರ ಮಾಡಿ ಹಣ ವಾಪಸ್ ಕೊಡುತ್ತೇವೆ ಬೆಂಗಳೂರಿಗೆ ಬಾ ಎಂದಿದ್ದಾರೆ. ಹೀಗಾಗಿ ಮಂಜುನಾಥ ತನ್ನ ತಾಯಿಗೆ ವಾಯ್ಸ್ ಮೇಸೆಜ್ ಕಳುಹಿಸಿ ನನಗೆ ಏನಾದ್ರೂ ತೊಂದರೆಯಾದರೆ ಮಾಗಡಿ ರಸ್ತೆ ಬಾ ಎಂದಿದ್ದ. 


ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದ ಹಂತಕರು ಬೆಂಗಳೂರಿಗೆ ಬಂದ ಮಂಜುನಾಥನಿಗೆ ಬುದ್ದಿವಾದ ಹೇಳುವ ಪ್ರಯತ್ನ ಮಾಡಿದ್ದಾರೆ.. ನಿನ್ನ ಪಾಡಿಗೆ ನೀನು ಇದ್ದುಬಿಡು. ಸರೋಜಾ ಸಹವಾಸಕ್ಕೆ ಬರಬೇಡ ಎಂದು ವಾರ್ನ್ ಮಾಡಿದ್ದಾರೆ. ಆದರೆ ಮಂಜುನಾಥ್ ಮಾತ್ರ ಸುತರಾಮ್ ಒಪ್ಪಿಲ್ಲ. ಹೀಗಾಗಿ ಮಾತಿಗೆ ಮಾತು ಬೆಳೆದು 7 ಮಂದಿ ಸೇರಿ ಮಂಜುನಾಥನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಗುರುತು‌ ಸಿಗದ ಹಾಗೇ ಬರ್ಬರವಾಗಿ ಹತ್ಯೆ ಮಾಡಿ ಬಾಗಲಕೋಟೆಗೆ ಎಸ್ಕೇಪ್ ಆಗಿದ್ದರು. 


ಇದನ್ನೂ ಓದಿ : ಮುಗಿಲೆದ್ದ ಕರ್ನಾಟಕ- ಮಹಾರಾಷ್ಟ್ರ ಗಡಿ ವಿಚಾರ, ಉಭಯ ರಾಜ್ಯಗಳ ಬಸ್ ಸಂಚಾರ ಸ್ಥಗಿತ


ಪ್ರಕರಣ ಗೊತ್ತಾಗುತ್ತಿದ್ದಂತೆ ಗಂಭೀರವಾಗಿ ಪರಿಗಣಿಸಿದ ಕೆಪಿ ಅಗ್ರಹಾರ ಪೊಲೀಸರು ತನಿಖೆ ಕೈಗೊಂಡಿದ್ದರು. ಯಾವುದೇ ಸಾಕ್ಷ್ಯಧಾರಗಳು ಸಹ ಸಿಗದ ಕಾರಣ ಪ್ರಕರಣ ಬೇಧಿಸುವುದು ಕಠಿಣವಾಗಿತ್ತು. ಆದರೆ ತಾಂತ್ರಿಕ ತನಿಖೆ ನಡೆಸಿದ ಪೊಲೀಸರು ಸದ್ಯ 6 ಮಂದಿ ಹಂತಕರನ್ನು ಎಳೆದು ತಂದಿದ್ದಾರೆ. ಸದ್ಯ ಪ್ರಮುಖ ಆರೋಪಿ ಸರೋಜಾಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.